ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮೆಕ್ಕಾ ಮಸೀದಿಯ ಅವಹೇಳನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಅಮಾಯಕ ಹಿಂದೂ ಕಾರ್ಯಕರ್ತರನ್ನು ಪೋಲೀಸರು ಪ್ರಕರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸಿದ್ದಾರೆ ಎಂದ ಬೆಳ್ತಂಗಡಿ ಹಿಂದೂ ಸಂಘಟನೆಗಳು ಆರೋಪಿಸಿವೆ. ಪೊಲೀಸ್ ಅಧಿಕಾರಿಗಳ ಈ ಹುನ್ನಾರವನ್ನು ವಿರೋಧಿಸಿ ಅಕ್ಟೋಬರ್ 28 ಶನಿವಾರದಂದು ಬೆಳ್ತಂಗಡಿಯ ಕಡಬ ಬಂದ್ ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಕಡಬದಲ್ಲಿ ಗುರುವಾರ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿವೆ. ವಾಟ್ಸಾಪ್ ಅವಹೇಳ ಪ್ರಕರಣದಲ್ಲಿ ಆರೋಪಿತ ಯುವಕನನ್ನು ಸಂಘಟನೆಯ ಪ್ರಮುಖರೇ ಪೋಲೀಸರಿಗೆ ಒಪ್ಪಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಆದರೆ, ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕರನ್ನು ಸಿಲುಕಿಸಲು ಪೊಲೀಸ್ ಅಧಿಕಾರಿಗಳು ಯತ್ನಿಸುತಿದ್ದಾರೆ ಎಂದು ಹಿಂದೂ ಸಂಘಟನೆಯ ಮುಖಂಡರು ಕಿಡಿಕಾರಿದರು.
Hindu organisations call Kadaba bandh on oct 28, becuase of the game play of Police officers. Deformative comments was made on Mecca Madina and though police have caught the real culprit yet police are trying to fix Hindu members in this case.